ಒಂದು ವಲಸೆ ಕಥೆ

Kiran Bhat

Artwork by Ehud Neuhaus

ನಾನು
ಹಾಗು ನನ್ನ ಅಪ್ಪ, ನನ್ನ ಅಮ್ಮ
ಕಿರಣ್ ಭಟ್ ಸುಬ್ರಮಣ್ಯ ಭಟ್ ಅನ್ನಪೂರ್ಣ ಭಟ್
ಇದೇ ನಮ್ಮ ಕುಟುಂಬ
ಇದೇ ನಮ್ಮ ಕಥೆ 

ಅಪ್ಪ
ಅಮ್ಮ
ನನ್ನ ಮೊದಲ ಪದಗಳು
ಅಮ್ಮ, ಮತ್ತು ಅಪ್ಪ
ತಂದೆ ತಾಯಿ
ಇವರಿಬ್ಬರು ನನ್ನ ಕುಟುಂಬ
ಇವರಿಬ್ಬರು ನನ್ನ ಪ್ರಪಂಚ

ಮಗನಾಗಿ
ನನ್ನ ಹೆತ್ತವರೊಂದಿಗೆ ನನ್ನ ಸಂಬಂಧ
ಅರ್ಥ ಮಾಡಿಕೊಳ್ಳುವದಕ್ಕೆ ಬಲು ಕಷ್ಟ 
ಗುಲಾಬಿಯ ಎಲ್ಲಾ ಮುಳ್ಳುಗಳನ್ನು ತೆಗೆದು
ಒಟ್ಟಾಗಿ ಸೇರಿ ಕೈಯಲ್ಲಿ ಹಿಡಿದರೆ
ಅದೇ ಸಂವೇದನೆ
ಅದೇ ಯಾತನೆ
ಅದೇ ನೋವು
ಅದೇ ನಮ್ಮ ಸಂಬಂಧ

ಆದರೆ ಅದೇ ಗುಲಾಬಿಯ ಪರಿಮಳವನ್ನು ಆಫ್ರಾಣಿನಿಸಿದರೆ
ಅದೇ ಸುಗಂಧ
ಅದೇ ಮಾಧುರ್ಯ
ಅದೂ ಸಹ ನಮ್ಮ ಸಂಬಂಧ 

ಯಾವುದೇ ಸಂಬಂಧಕ್ಕೆ ಸಾಧಕ ಹಾಗು ಬಾಧಕಗಳಿವೆ
ನನ್ನ ಅಪ್ಪ ಅಮ್ಮ ಇಲ್ಲದೆ ನಾನು ನನ್ನಂತೆ ಇರುವುದಿಲ್ಲ
ನಾನು ಇಲ್ಲದೆ ಸುಬ್ರಹ್ಮಣ್ಯ ಹಾಗು ಅನ್ನಪೂರ್ಣ ಭಟ್ ಸಹ ವಿಭಿನ್ನವಾಗಿರುತ್ತಾರೆ
 
ನನ್ನ ಮೊದಲ ಪರಿಚಯ ನನ್ನ ಅಮ್ಮ.

ಕರುಳು ಬಳ್ಳಿ
ನನ್ನ ದೇಹ ಅವರ ದೇಹಕ್ಕೆ ಜೋಡಿಸಲ್ಪಟ್ಟಿತ್ತು
ಅವರ ಆತಂಕ, ಹಾಗು ನನ್ನ ಆತಂಕ
ನನ್ನ ಹೆದರಿಕೆಗಳು, ಹಾಗು ಅವರ ಚಿಂತೆಗಳು 
ಒಂದೇ ದೇಹ ಒಂದೇ ಭಾವನೆಗಳು
.
ಬ್ರಹ್ಮ 
ನನ್ನನ್ನು
ಹಾಗೂ ನನ್ನ ಅಮ್ಮನನ್ನೂ
ಈ ಎರಡೂ ಆತ್ಮಗಳನ್ನೂ 
ಸಂಬಂಧ ಇಲ್ಲದ
ಜೀವ ಇಲ್ಲದ
ನಮ್ಮಿಬ್ಬರನ್ನೂ ನೋಡಿ,
ನಮಗೆ ಒಂದು ಸಂಬಂಧ ಬೇಕಿತ್ತು, ಅಂತ ನಿರ್ಧರಿಸಿತು
ನನ್ನನು ನನ್ನ ಅಮ್ಮನ ಗರ್ಭದಲ್ಲಿ ಹಾಕಿತು
 
ನಾನು ಜನ್ಮವೆತ್ತಿದ ನಂತರ
ನಾನು ನನ್ನ ಅಪ್ಪನನ್ನು ಭೇಟಿ ಆದೆ
ವಿಧಿ ಯಾಕೆ ನಾವಿಬ್ಬರೂ ಹಣೆಬರಹ ಹಂಚಿಕೊಳ್ಳಬೇಕೆಂದು 
ನನಗೆ ತಿಳಿಸಲಿಲ್ಲ
ಆದರೆ ನನ್ನ ಅಪ್ಪ
ಅಷ್ಟೊಂದು ಪ್ರೇಮದಿಂದ ನನ್ನನ್ನು ತಬ್ಬಿಕೊಂಡಿದ್ದು
ನಮಗಿಬ್ಬರಿಗೂ ಇಡೀ ಜೀವನಕ್ಕೊಂದು ಬಂಧ ಬೇಕಿತ್ತು
ನಾನು ನಿಶ್ಚಯಿಸಿದ್ದೆ
 
ನಾನು ಅಮೇರಿಕಾದಲ್ಲಿ ಹುಟ್ಟಿ ಬೆಳೆದೆ
ಆದರೆ, ನಾನು ಕೂಡ ಮಂಗಳೂರಿನಲ್ಲಿ ಹುಟ್ಟಿದ್ದೆ
ನನ್ನ ಆತ್ಮ ಅಲ್ಲಿಂದ ಮೂಡಿದೆ
 
ಹೇಗೆಂದರೆ,
 
ನನ್ನ ಅಪ್ಪ ಅಮ್ಮ ಕರ್ನಾಟಕದಿಂದ ಅಮೆರಿಕಾಗೆ ವಲಸೆ ಹೋಗಿದ್ದರು
ಒಂದು ಮದುವೆಯಲ್ಲಿ ಭಾಗವಹಿಸಲು
ಮಂಗಳೂರಿಗೆ ವಾಪಾಸ್ ಹೋದರು
ಅಷ್ಟುಹೊತ್ತಿಗೆ 
ನನ್ನ ಅಪ್ಪ ಅಮ್ಮ ತಮ್ಮ ಕುಟುಂಬ ಶುರು ಮಾಡಲು ತಯಾರಿದ್ದರು
ಆದರೆ ಅಮೇರಿಕಾದಲ್ಲಿ ಅವರಿಗೆ ಬಿಡುವೇ ಇರಲಿಲ್ಲ
ಮಗುವನ್ನು
ಗರ್ಭಧರಿಸಲು ನನ್ನ ಅಮ್ಮ ಸಿದ್ಧರಾಗಿದ್ದರು
ಅಲ್ಲಿ ಅದೇ ಮದುವೆ ಸಮಯದಲ್ಲಿ ನನ್ನ ಅಪ್ಪ  ನನ್ನ ಅಮ್ಮ ಬಸಿರಾಗಲು ಪ್ರಯತ್ನ ಪಟ್ಟರು
ಅವರಿಗೆ  ಯಶಸ್ಸು ಸಿಕ್ಕಿತ್ತು
 ನನ್ನ ಅಮ್ಮ ನನ್ನನ್ನು ಬಸಿರಿನಲ್ಲಿ ಹೊತ್ತರು

ಎಂಟು ತಿಂಗಳು ನಂತರ ನಾನು ಹುಟ್ಟಿದೆ

ಆದರೆ ನನ್ನ ಕಥೆ ನನ್ನ ಜನ್ಮದಿಂದ ಕೂಡ ಶುರು ಆಗಲಿಲ್ಲ

ನಮ್ಮ ಕಥೆ
ನಮ್ಮ ಊರಿನಿಂದ
ನನ್ನ ಪೂರ್ವಜರಿಂದ
ಅವರೆಲ್ಲರಿಂದಲೂ ಅಲ್ಲಿಂದಲೂ
ನನ್ನ ಕಥೆ ಶುರು ಆಗಿದೆ
 
ಸಾವಿರ ವರ್ಷಗಳ ಹಿಂದೆ
ಶ್ರೇಯಸ್ಕರವಾದ ಹಾಗು ಮಂಗಳಕರವಾದ ಪೂಜೆ ಮಾಡಿಸುವುದಕ್ಕೋಸ್ಕರ
ಆ ಕಾಲದ ರಾಜರು
ಮಂಗಳೂರು ತೀರದವರೆಗೆ ನನ್ನ ಪೂರ್ವಜರನ್ನು ಕರೆತಂದಿದ್ದರು
 
ಇದೆ ನಮ್ಮ ಹವ್ಯಕ ಬ್ರಾಹ್ಮಣ ಕಥೆ
ಈ ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ
ಆದರೆ ಸತ್ಯಕ್ಕಿಂತ ಪೌರಾಣಿಕ ಮಿಥ್ಯಗಳು ಹೆಚ್ಚು ಪ್ರಬಲ
ನನ್ನ ಜೀವನ ಅದನ್ನೇ ನನಗೆ ಕಲಿಸಿಕೊಟ್ಟಿದೆ
 
ಮತ್ತು ಈ ಕಥೆ ನನ್ನ ಕಥೆ ಅಲ್ಲ
ಇದು ನನ್ನ ಅಪ್ಪ ಅಮ್ಮನ ಕಥೆ
 
ತಾಳಿ, ಮತ್ತೆ ಶುರು ಮಾಡುತ್ತೇನೆ 
 
ನನ್ನ ಅಪ್ಪ
ಅಮೆರಿಕಾದವರೆಗೆ ಬರಲು ತುಂಬಾ ಶ್ರಮ ಪಟ್ಟರು
ಅಲ್ಲಿ ಕಾಸರಗೋಡಲ್ಲಿ ಹುಟ್ಟಿ ಬೆಳೆದರು
ಹೊರ ದೇಶವನ್ನು ಅನುಭವಿಸಲು ಹೆಬ್ಬಯಕೆ ಹೊಂದಿದ್ದರು
ಗಣಿತ ಹಾಗು ವಿಜ್ಞಾನ ಚೆನ್ನಾಗಿ ಕಲಿತರು
ನ್ಯೂಯಾರ್ಕಿನಲ್ಲಿ  ವೈದ್ಯರಾಗಿ ರೆಸಿಡೆನ್ಸಿ ಮಾಡಲು ಅವರನ್ನು ಕರೆದಿದ್ದರು
.
 
ನನ್ನ ಅಮ್ಮ
ಕೊಡಗಿನಲ್ಲಿ ಹುಟ್ಟಿದ್ದು,
ನನ್ನ ಅಜ್ಜ ಒಬ್ಬ ಬ್ಯಾಂಕರ್.
ಕೆಲಸದ ಸಲುವಾಗಿ ಇಡೀ ಕರ್ನಾಟಕ ತನ್ನ ಕುಟುಂಬದೊಂದಿಗೆ ಸುತ್ತಿದ್ದರು
ನನ್ನ ಅಮ್ಮ ವೈವಿಧ್ಯಮಯ ಹಾಗೂ ಅಪರೂಪದ ಸ್ಥಳಗಳಲ್ಲಿ
ಬೆಳೆದರು
ವೈದ್ಯರಾಗಲು ಮಣಿಪಾಲದಲ್ಲಿ ಓದಿದ್ದರು
ಅವರ ಪದವಿ ಆದ ತಕ್ಷಣ ನನ್ನ ಅಜ್ಜ ಅಜ್ಜಿ ಮೈಸೂರಿನಲ್ಲಿ ನೆಲೆಸಲು ನಿಶ್ಚಯಸಿದ್ದರು
ಸ್ವಂತದ್ದೆಂದು ಕರೆಯಲಿಕ್ಕೆ ನನ್ನ  ಅಮ್ಮಂಗೆ ಒಂದೂರು ಇರಲಿಲ್ಲ
ಅವರ ಕುಟುಂಬ ಎಲ್ಲಿತ್ತೋ
ಅಲ್ಲಿಯೇ ಅವರ ಮನೆ
 
ನನ್ನ ತಂದೆ ತಾಯಿಯ ಮದುವೆಯನ್ನು ಅವರ ತಂದೆ ತಾಯಿಯೇ ನಿಶ್ಚಯಿಸಿದ್ದರು
ನನ್ನ ಅಪ್ಪ ನನ್ನ ಅಮ್ಮ ಸರಿಯಾಗಿ ಅರ್ಥ ಮಾಡಿಕೊಳ್ಳಲು
ಒಬ್ಬರಿಗೊಬ್ಬರು ಪತ್ರಗಳನ್ನು ಬರೆದರು
ನನ್ನ ಅಪ್ಪನ ಸ್ವಭಾವ ಈ ಬರಹಗಳಲ್ಲಿ ತೆರೆದುಕೊಂಡ ರೀತಿಯಿಂದ
ಅಮ್ಮನಿಗೆ ಇಷ್ಟ ಆಗಿ, ಪ್ರೇಮ ಅರಳಿತು
ಇಬ್ಬರ ಪ್ರತ್ಯೇಕ ಬದುಕುಗಳು
ಒಂದಾಗಿ, ಒಂದಾದ ಬದುಕಿನ
ಕಲ್ಪನೆ ಆರಂಭವಾಯಿತು 
 
ನನ್ನ ಅಪ್ಪ ನ್ಯೂಯಾರ್ಕಿನಲ್ಲಿ ಅವರ ರೆಸಿಡೆನ್ಸಿ ಮಾಡಿದರು
ನನ್ನ ಅಮ್ಮನಿಗೆ ಎಮೊರಿಯಲ್ಲಿ ರೆಸಿಡೆನ್ಸಿ  ಸಿಕ್ಕಿತು
ನನ್ನ ಅಪ್ಪನಿಗೂ ಕೆಲಸ ಮಾಡಲು ಜಾರ್ಜಿಯಾದಲ್ಲಿ  ಅವಕಾಶ  ಸಿಕ್ಕಿತು
 
ಕೆಲಸ  ಸಿಕ್ಕಿದ್ದ ಕಾರಣ
ಅಲ್ಲಿ ಜಾರ್ಜಿಯಾದಲ್ಲಿ  ತಮ್ಮ ಕುಟುಂಬ ಶುರು ಮಾಡಬೇಕಂತ ಆಯಿತು.
 
 
ಮತ್ತು ನನ್ನ ಚಿಕ್ಕಮ್ಮನ ಮದುವೆ
ಮತ್ತು ನನ್ನ ಜನ್ಮ
 
ಮಂಗಳೂರುನಲ್ಲಿ
ನನ್ನ ಆತ್ಮ ಮೂಡಿತ್ತು
 
ಜೋನ್ಸ್ಬೊರೊ ಜಾರ್ಜಿಯಾದಲ್ಲಿ
ನನ್ನ ದೇಹ ಹುಟ್ಟಿತ್ತು
 
ಜೋನ್ಸ್ ಬೊರೊ ಜಾರ್ಜಿಯಾ ಒಂದು ಗ್ರಾಮ
ಜೋನ್ಸ್ ಬೊರೊ ಜಾರ್ಜಿಯಾದ ಜನಸಂಖ್ಯೆ ಒಂದು ಸಾವಿರಕ್ಕೊ ಕಡಿಮೆ
 ಕಪ್ಪು ಹಾಗು ಬಿಳಿ ಜನರ ಜನಸಂಖ್ಯೆಯೇ ಹೆಚ್ಚು
ಈಗ ಅಲ್ಲಿ ತುಂಬಾ ವಿಯೆಟ್ನಾಮೀಸ್ ಜನರಿದ್ದಾರೆ
ಆದರೆ ಆ ಸಮಯದಲ್ಲಿ ವಲಸೆ ಜನರ ಸಂಖ್ಯೆ ಕಡಿಮೆ ಇತ್ತು
 
ಜೋನ್ಸ್‌ಬೊರೊ ಜಿಎ ಅಮೆರಿಕನ್ ಸಿವಿಲ್ ವಾರ್‌ನಲ್ಲಿ ಜೋನ್ಸ್‌ಬೊರೊ ಕದನಕ್ಕೆ ಪ್ರಸಿದ್ಧವಾಗಿದೆ
Gone with the Wind ಕಾದಂಬರಿಯನ್ನು ಅಲ್ಲಿ ಕಲ್ಪಿತವಾಯಿತು
ಗುಲಾಮರಿಗಿಯೂ ಅಲ್ಲಿ ಅನೇಕ ಶತಮಾನಗಳವರೆಗೆ ಸಾಮಾನ್ಯವಾಗಿತ್ತು, ಹಾಗಾಗಿ
ಜೋನ್ಸ್‌ಬೊರೊ ಇತಿಹಾಸವು ಜನಾಂಗೀಯ ಸಂಘರ್ಷದಲ್ಲಿ ಮುಳುಗಿದೆ.
 
ನಾನು ನನ್ನ ಬಾಲ್ಯ ಕಾಲದಲ್ಲಿ ತುಂಬಾ ಕಷ್ಟ ಪಟ್ಟೆ

ಆದರೆ ಇದನ್ನು ಒಂದು ಸ್ಥಳೀಯ ಕಥೆ ಮಾತ್ರ ಅಲ್ಲ
 
ಇದು ಒಂದು ವಲಸೆ ಕಥೆ
ನನ್ನ ಅಪ್ಪ ಅಮ್ಮನ ಕಥೆ
 
ನನ್ನ ಅಪ್ಪ ಅಮ್ಮ ಜೋನ್ಸ್ಬೊರೊ ಜಾರ್ಜಿಯಾದಲ್ಲಿ
ಅವರ ಸ್ವಂತ ಬದುಕನ್ನು ಹೇಗೆ ಅನುಭವಿಸುತ್ತಾರೆ ನನಗೆ ಗೊತ್ತಿಲ್ಲ
ಈಗ ಅವರಿಗೆ ಜಾರ್ಜಿಯಾದಲ್ಲಿ ವಾಸಿಸುವುದು ತುಂಬಾ ಇಷ್ಟ
ಆದರೆ ನನ್ನ ಅಪ್ಪ ಅಮ್ಮ ಈಗಾಗಲೇ ಮೂವತ್ತು ವರ್ಷಕ್ಕೂ ಹೆಚ್ಚು ಜಾರ್ಜಿಯಾದಲ್ಲಿ ವಾಸ ಮಾಡಿದ್ದಾರೆ
ಅವರ ಜೀವನದ ಮೊದಲರ್ಧ ಭಾರತದಲ್ಲಿ ಇತ್ತು
ಮತ್ತೊಂದರ್ಧ ಅಮೇರಿಕಾದಲ್ಲಿದೆ
ಖಂಡಿತವಾಗಿಯೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು
ನನ್ನ ಅಪ್ಪ ಅಮ್ಮ ತುಂಬಾ ಬದಲಾಗಿದ್ದರು
ಈಗ ನನ್ನ ಮುಂದೆ ಇರುವ ನನ್ನ ಅಪ್ಪ ಅಮ್ಮ
ನನ್ನ ಬಾಲ್ಯಕಾಲದಲ್ಲಿ ಇದ್ದ ನನ್ನ ಅಪ್ಪ ಅಮ್ಮ,
 ವಿಭಿನ್ನ

  ನನ್ನ ಅಪ್ಪ ಅಮ್ಮ ಮುಂಚೆ ಹೇಗಿದ್ದರು ಎಂದು ಕಲ್ಪಿಸಿಕೊಳ್ಳಬಹುದು
ಆದರೆ ನನ್ನ ಕಲ್ಪನೆಯಲ್ಲಿ ಇರುವುದೆಲ್ಲಾ
 ವಾಸ್ತವ ಅಲ್ಲ
 
ನಾವು ಪ್ರತಿ ಕ್ಷಣ ಇಡೀ ಕ್ಷಣ ಅದೇ ಕ್ಷಣ
ನಾವು ನೋಡುವುದು ಅನುಭವಿಸುವುದು, ಭಾವಿಸುವುದು
ಅದು ಮಾತ್ರ ನಮ್ಮ ನಿಜ
 
ಆದರೆ ನನ್ನ ಅಪ್ಪ ಅಮ್ಮ ಜಾರ್ಜಿಯಾದ ನಿವಾಸಿಗಳಾಗಿರಲು ಕಲಿತರು
ನಾವು ನನ್ನ ಅಜ್ಜಿ ಅಜ್ಜರನ್ನು ನೋಡಲು ಪ್ರತಿ ವರ್ಷ ಮೈಸೂರಿಗೆ ಹೋಗುತ್ತಿದ್ದೆವು
ಕೆಲವೊಮ್ಮೆ ನನ್ನ ಅಜ್ಜಿ ಅಜ್ಜಿ ನಮ್ಮ ಜೊತೆ ಅಮೇರಿಕಾದಲ್ಲಿ ಬಂದಿರುತ್ತಿದ್ದರು
ನನ್ನ ಅಪ್ಪ ಅಮ್ಮಂದಿರಿಗೆ ಕೆಲಸ  ತುಂಬಾ ಇರುತ್ತಿತ್ತು
ಹೊಸ ಸಂಸ್ಕೃತಿಯಲ್ಲಿ ಸ್ನೇಹ ಬೆಳೆಸಲು ಅವರಿಗೆ ಕಷ್ಟವಿತ್ತು
ಆದರೆ ಈಗ ಜಾರ್ಜಿಯಾದಲ್ಲಿ ಸಮಾಜ ಅವರಿಬ್ಬರನ್ನು ಸ್ವೀಕರಿಸಿದೆ
ಹೇಗೆ ಇವರಿಬ್ಬರು ಇಂಥಾ ಹೊಸ ವಾತಾವರಣಕ್ಕೆ ಹೊಂದಿಕೊಂಡರು
ಆ ಕಷ್ಟವನ್ನು ನಾನು ಅನುಭವಿಸಿಲ್ಲ

 ನನಗೆ ಅನುಭವಿಸಲು ನನ್ನದೇ ಬಾಲ್ಯದ ಸಮಸ್ಯೆಗಳಿದ್ದವು 

ಅಲ್ಲಿ ವಾಲ್ಮಾಟಿನಲ್ಲಿ ಒಬ್ಬರು ನಮಗೆ ನೀವು ನಿಮ್ಮ ದೇಶಕ್ಕೆ ವಾಪಸು ಹೊರಟು ಹೋಗಿ ಎಂದು ಹೇಳಿದರು
ನಾವು ಭಾರತೀಯ ಉಡುಪು ಧರಿಸಿದಾಗ ಜನರು ಇಣುಕಿ ನೋಡಿದರು
 
ನಾನು ಅದನ್ನು ನೆನಪಿಸಿಕೊಳ್ಳುತ್ತೇನೆ

ಆದರೆ ನನಗೇನನ್ನಿಸುತ್ತದೆ? 

ನನ್ನ ಅಪ್ಪ ಅಮ್ಮ ತುಂಬಾ ಸಂಕಷ್ಟ ಅನುಭವಿಸಿದರು
ಈ ದೇಶ ತಮ್ಮ ದೇಶ ಆಗಬೇಕೆಂದು
ಈಗ ಅವರಿಗೆ ನಮ್ಮ ಊರಿನಲ್ಲಿ ಬಹಳ ಅಧಿಕಾರ ಇದೆ
ಬಡ ಜನರಿಗೋಸ್ಕರ ಧಾರಾಳವಾಗಿ ದಾನ ಮಾಡುತ್ತಾರೆ
ಯಾರೂ ಏನೂ ಯಾಚಿಸದಿದ್ದರೂ ಸಹಾಯ ಮಾಡುತ್ತಾರೆ 

ಈ ಸಮಾಜಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ
 
ನಮ್ಮ ವಲಸೆ ಕಥೆ
ಯಾವುದೇ ವಲಸಿಗರ ವಲಸೆ ಕಥೆ
 
ಒಂದು ಹೊಸ ಊರಿಗೆ ಹೋಗುವುದು
ಬಾಳುವುದು
ಭಾಷೆ ಕಲಿಯುವುದು
ಅಲ್ಲಿಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು
ಜೀವನ ವಿಧಾನಕ್ಕೆ ಹೊಂದಿಕೊಳ್ಳುವುದು
 
ನಿಮ್ಮ ಹಳೆಯ ಸಂಸ್ಕೃತಿಯನ್ನು 
ಹೊಸ ಸಂಸ್ಕೃತಿಯೊಡನೆ
ಮಿಲಾಯಿಸುವುದು

ಒಂದು ಹೊಚ್ಚಹೊಸ ಸಂಸ್ಕೃತಿ
ಮೂಡುವುದು
 
ಅದೇ ನಮ್ಮ ಸಂಸ್ಕೃತಿ
ಆಗಿ ಬಿಡುವುದು
ಆದರೆ ನನ್ನ ಅಪ್ಪ ಅಮ್ಮ
ತಮ್ಮ ಸಂಸ್ಕೃತಿಗಳನ್ನು ಬದಲಾಯಿಸಲು
ಅಮೆರಿಕಾಕ್ಕೆ ಬರಲಿಲ್ಲ 
 
ವೃತ್ತಿಗಾಗಿ ಬಂದಿದಾರೆ
ಅವರ ಸ್ವಂತ ಜೀವನಕ್ಕೆ
 ಸಂಪತ್ತು, ಸಮೃದ್ಧಿ ಮತ್ತು ಅವಕಾಶಗಳನ್ನು ಗಳಿಸಿಕೊಳ್ಳಲು
ಬಂದಿದ್ದಾರೆ
ನನಗೂ 
ಸಂಪತ್ತು ಮತ್ತು ಅವಕಾಶಗಳನ್ನು ಕೊಡಲು 
ಬಂದಿದ್ದಾರೆ 
 
(ನಾನೇಕೆ ಅವರಿಗೆ ಕಠಿಣವೆನ್ನಿಸುವ ಭಾರತಕ್ಕೆ
ವಾಪಸು ಹೋಗಿದ್ದೇನೆ
 ಅವರ ಮನಸ್ಸಿನಲ್ಲಿರುವ 
ಒಂದು ದೊಡ್ಡ
ಪ್ರಶ್ನೆ) 

ಆದರೆ ಇದು ನನ್ನ ವಲಸೆ ಕಥೆ ಅಲ್ಲ
ಇದು ಅವರ ವಲಸೆ  ಕಥೆ
 
ನನ್ನ ಅಪ್ಪ ಅಮ್ಮ ನನಗೆ
ಒಂದು ಒಳ್ಳೆಯ ಜೀವನ ಕೊಡಲು
ತುಂಬಾ ದೂರ ಬಂದಿದ್ದರು
ಅಮೇರಿಕಾದಲ್ಲಿ ಒಂದು ಒಳ್ಳೆಯ ಜೀವನ  ಸಿಕ್ಕಿತ್ತು ನಮಗೂ
ನೆಂಟರಿಷ್ಟರನ್ನು ನೋಡಲು
ಇಂಡಿಯಾದವರೆಗೆ ಪ್ರಯಾಣ ಮಾಡುತ್ತಾರೆ
ಕೆಲವೊಮ್ಮೆ ಮೆಡಿಕಲ್ ಕಾನ್ಫೆರೆನ್ಸಗಳಲ್ಲಿ ಭಾಗವಹಿಸಲು ಪಯಣಿಸುತ್ತಾರೆ 

ಆದರೆ ಹೆಚ್ಚಾಗಿ ಅಮೇರಿಕಾದಲ್ಲಿಯೇ ವಾಸಿಸುತ್ತಾರೆ
ನಮ್ಮ ಜಾರ್ಜಿಯಾದ ಸಣ್ಣ ಪಟ್ಟಣ ಜೋನ್ಸ್‌ಬೊರೊ
 ಅವರ ಮನೆಯಾಗಿದೆ

 ನಾನು ನನ್ನ ಬೇರಿಲ್ಲದ ಸ್ಥಿತಿಯಿಂದಾಗ
ಅಥವಾ
 ನನ್ನ ಸ್ವಂತ ಬೇರಿನ ಬಗ್ಗೆ ಅರಿವಿನ ಅಭಾವದಿಂದಾಗ
 ನನ್ನ ತವರೂರಿನಲ್ಲಿ ಬದುಕುವುದು ನನಗೆ ಆಗಲಿಲ್ಲ

 ನನ್ನ ಅಪ್ಪ ಅಮ್ಮ ತಾವು ಹುಟ್ಟಿಬೆಳೆದ ಊರಿನಿಂದ ದೂರವಿದ್ದಾರೆ
ನನ್ನ ಅಪ್ಪ ಅವರ ಊರು ಜಾರ್ಜಿಯಾ ಅಂತ
ಸಂತೋಷವಾಗಿ ಹೇಳುತ್ತಾರೆ
 
ಕೆಲವು ಜನರು ಯುದ್ಧದಿಂದ ಅವರ  ಮನೆಗಳಿಂದ ಪರಾರಿ ಮಾಡುವರು
ಕೆಲವು ಜನರು ಎಲ್ಲಿ ಅವರ ಕುಟುಂಬ ಇರುವುದೋ
 ಅಲ್ಲಿಗೆ ಹೋಗುವರು
ಕೆಲವು ಜನರು ಸಾಹಸಿಗರು
ಅನ್ಯ ಜನಾಂಗದವರ ಊರಿನಲ್ಲಿ ನೆಲೆಸುವರು  

ಆದರೆ ಕೊನೆಗೆ ನಮ್ಮ ಮನೆ ಎಲ್ಲಿರುವುದೆಂದು
ನಮ್ಮ ವಿಧಿ ತೋರಿಸುವುದು
ಜೀವನ ಸಂದರ್ಭಗಳನ್ನು ಮುಂದಿಡುವುದು
ನಮ್ಮ ಹೃದಯ ಹೇಳುವುದು
ನಾವು ಯಾವುದೇ ಕಡೆಗಾದರೂ ಹೋಗಬಹುದು
 
ಅಲ್ಲಿಯ ಒಂದು ಭಾಗವಾಗಬಹುದು
 
ನನ್ನ ಅಪ್ಪ ಅಮ್ಮ ವೈದ್ಯರಾಗಿ
 ಕರ್ನಾಟಕದ ಮುಖ್ಯ ಪ್ರತಿನಿಧಿಗಳಾಗಿ
 ಜಾರ್ಜಿಯಾದಲ್ಲಿ ನೆಲೆಸುವುದು
 
ಈಗ ಇದೇ ಕವನ
ಅವರ ವಲಸೆ ಕಥೆ ಮಾತ್ರ
ಅಲ್ಲ

 ಇದು ಅಮೇರಿಕಾದ ಸ್ಥಳೀಯರ ಕಥೆಯೇ ಆಗಿದೆ 
ಇದು ಅಮೇರಿಕಾ ನೆಲೆದ ಕಥೆಯೇ ಆಗಿದೆ